ಮತದಾರರ ಪಟ್ಟಿ ಪರಿಷ್ಕರಣೆ : ತಮಿಳುನಾಡಿನಲ್ಲಿ 97 ಲಕ್ಷ ಮತದಾರರ ಹೆಸರು ಡಿಲೀಟ್
ಚೆನ್ನೈ: ತಮಿಳುನಾಡಿನಲ್ಲಿ ವಿಶೇಷ ತೀವ್ರ ಪರಿಷ್ಕರಣೆ, ಅಂದರೆ SIR ಪ್ರಕ್ರಿಯೆ ನಂತರದ ಅಂತಿಮ ಮತದಾರರ ಪಟ್ಟಿಯನ್ನು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಅರ್ಚನಾ ಪಟ್ನಾಯಕ್ ಅವರು ಇಂದು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಈ ಅಂತಿಮ ಪಟ್ಟಿಯಂತೆ, ರಾಜ್ಯದಲ್ಲಿ ಒಟ್ಟು 5 ಕೋಟಿ 67 ಲಕ್ಷಕ್ಕೂ ಅಧಿಕ ಮತದಾರರು ಇದ್ದು, ಇದರಲ್ಲಿ 2.89 ಕೋಟಿ ಮಹಿಳೆಯರು ಮತ್ತು 2.77 ಕೋಟಿ ಪುರುಷ ಮತದಾರರು ಸೇರಿದ್ದಾರೆ.
590 ಕೋಟಿ ರೂ. ಅಕ್ರಮ ನಡೆದಿರುವುದು ದೃಢಪಟ್ಟಿದೆ.
ಸರ್ಕಾರಿ ಇಲಾಖೆಯ ಪುಸ್ತಕಗಳಲ್ಲಿ ನಮೂದಿಸಲಾದ ಮೊತ್ತಕ್ಕೂ ಬ್ಯಾಂಕ್ ಖಾತೆಯಲ್ಲಿನ ವಾಸ್ತವ ಬ್ಯಾಲೆನ್ಸ್‌ಗೂ ಹೊಂದಾಣಿಕೆಯಾಗದಿರುವುದು ಈ ವಂಚನೆಯ ಮೂಲ. ಮೊತ್ತದಲ್ಲಿನ ಭಾರಿ ವ್ಯತ್ಯಾಸದಿಂದಾಗಿ, ಇಲಾಖೆಯು ತನ್ನ ಬ್ಯಾಂಕ್ ಖಾತೆಯನ್ನು ಮುಚ್ಚಿ ಬೇರೆಡೆಗೆ ವರ್ಗಾಯಿಸಲು ಮನವಿ ಮಾಡಿದಾಗ ಈ ವಂಚನೆಯ ಸುಳಿವು ಸಿಕ್ಕಿದೆ.
ಫೆಬ್ರವರಿ 18 ರಿಂದ, ಹರಿಯಾಣದ ಹಲವಾರು ಸರ್ಕಾರಿ ಇಲಾಖೆಗಳು ತಮ್ಮ ಖಾತೆಗಳಲ್ಲೂ ಇದೇ ರೀತಿಯ ಸಮಸ್ಯೆ ಎದುರಾಗಿದೆ ಎಂದು ದೂರು ನೀಡಿವೆ. ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ನಡೆಸಿದ ಸಮಗ್ರ ಪರಿಶೀಲನೆಯಲ್ಲಿ ಒಟ್ಟು 590 ಕೋಟಿ ರೂ. ಅಕ್ರಮ ನಡೆದಿರುವುದು ದೃಢಪಟ್ಟಿದೆ.
- Read more about 590 ಕೋಟಿ ರೂ. ಅಕ್ರಮ ನಡೆದಿರುವುದು ದೃಢಪಟ್ಟಿದೆ.
- Log in or register to post comments
ಸರ್ಕಾರಿ ಖಾತೆಯಲ್ಲೇ 590 ಕೋಟಿ ರೂ. ಮಾಯ - ಬ್ಯಾಂಕ್ ಉದ್ಯೋಗಿಗಳ ಕೈವಾಡ ಬಯಲು!
ಹರಿಯಾಣ ಸರ್ಕಾರದ ಇಲಾಖೆಗಳ ಖಾತೆಯಲ್ಲಿ ಸುಮಾರು 590 ಕೋಟಿ ರೂ. ಮೊತ್ತದ ಬೃಹತ್ ವಂಚನೆ ಬೆಳಕಿಗೆ ಬಂದಿದೆ. ಈ ಪ್ರಕರಣದ ಕುರಿತು ಬ್ಯಾಂಕ್ ತನಿಖೆಯನ್ನು ಆರಂಭಿಸಿದೆ.
ನೀವು ಯಾವುದೇ ತಪ್ಪು ಮಾಡಿಲ್ಲ, ನಿಮ್ಮ ಜಿಮ್‌ಗೆ ನಾನು ಮೆಂಬರ್ ಆಗುವೆ - 'ಮೊಹಮ್ಮದ್ ದೀಪಕ್'ಗೆ ರಾಹುಲ್ ಗಾಂಧಿ ಅಭಯ ಹಸ್ತ
ನವದೆಹಲಿ: ಮುಸ್ಲಿಂ ವ್ಯಕ್ತಿಯನ್ನು ರಕ್ಷಿಸಿ ದೇಶದ ಗಮನ ಸೆಳೆದಿದ್ದ ಜಿಮ್ ತರಬೇತುದಾರ ದೀಪಕ್ ಕುಮಾರ್ ಅವರನ್ನು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ಭೇಟಿ ಮಾಡಿದರು. ಕೋಮುವಾದದ ವಿರುದ್ಧ ನಿಂತ ದೀಪಕ್‌ಗೆ ವೈಯಕ್ತಿಕ ಬೆಂಬಲ ನೀಡಿದ ರಾಹುಲ್ ಗಾಂಧಿ, ಅವರ ಜಿಮ್‌ಗೆ ಸೇರುವುದಾಗಿ ತಿಳಿಸಿದ್ದಾರೆ. ಈ ಭೇಟಿಯು ದೀಪಕ್ ಅವರ ಜೀವನೋಪಾಯದ ಮೇಲೆ ಪರಿಣಾಮ ಬೀರಿದ ಘಟನೆಯ ನಂತರ ನಡೆದಿದೆ.
ಕೋಟ್‌ದ್ವಾರದಲ್ಲಿ 'ಹಲ್ಕ್' ಎಂಬ ಜಿಮ್ ಹೊಂದಿರುವ ದೀಪಕ್ ಕುಮಾರ್, ಜನವರಿ 26ರಂದು ಅಹ್ಮದ್ ಅವರ 'ಬಾಬಾ ಸ್ಕೂಲ್ ಡ್ರೆಸ್ ಮತ್ತು ಮ್ಯಾಚಿಂಗ್ ಸೆಂಟರ್' ಅಂಗಡಿಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಬಜರಂಗದಳದ ಕಾರ್ಯಕರ್ತರನ್ನು ಎದುರಿಸಿದ್ದರು. ಪ್ರತಿಭಟನಾಕಾರರು ಅಂಗಡಿಯ ಹೆಸರನ್ನು ಬದಲಾಯಿಸಲು ಒತ್ತಾಯಿಸಿದ್ದು, ಮಾಲೀಕರು ನಿರಾಕರಿಸಿದಾಗ ವಾದ ತೀವ್ರಗೊಂಡಿತು. ಈ ಸಂದರ್ಭದಲ್ಲಿ ದೀಪಕ್ ಮಧ್ಯಪ್ರವೇಶಿಸಿ ಅಂಗಡಿ ಮಾಲೀಕರನ್ನು ರಕ್ಷಿಸಿದ್ದರು. ಈ ಘಟನೆ ನಡೆದ ನಂತರ, ಒಂದು ಡಜನ್‌ಗೂ ಹೆಚ್ಚು ಸದಸ್ಯರು ಅವರ ಜಿಮ್ ತೊರೆದಿದ್ದು, ಇದು ದೀಪಕ್ ಅವರ ಜೀವನೋಪಾಯದ ಮೇಲೆ ತೀವ್ರ ಪರಿಣಾಮ ಬೀರಿತ್ತು. ರಾಷ್ಟ್ರೀಯ ಗಮನ ಸೆಳೆದ ಈ ಘಟನೆಯಲ್ಲಿ ದೀಪಕ್ ತಮ್ಮನ್ನು "ಮೊಹಮ್ಮದ್ ದೀಪಕ್" ಎಂದು ಪರಿಚಯಿಸಿಕೊಂಡಿದ್ದರು.
ಅಭಿವೃದ್ಧಿಯೊಂದಿಗೆ ಪರಿಸರ ರಕ್ಷಣೆಗೆ ಆದ್ಯತೆ ನೀಡಿ-ಲೋಖಂಡೆ ಸ್ನೇಹಲ್ ಸುಧಾಕರ್
ಬೆಂಗಳೂರು:ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಕೆ.ಆರ್.ಪುರ ವಲಯದಲ್ಲಿ ವಿಭಿನ್ನ ರೀತಿಯಲ್ಲಿ ಜಂಕ್ಷನ್ ಗಳನ್ನು ಅಭಿವೃದ್ಧಿಪಡಿಸುವ ಕುರಿತು ಕಾರ್ಯಸಾಧ್ಯತೆ ಬಗ್ಗೆ ಪರಿಶೀಲಿಸುವ ಸಲುವಾಗಿ ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ರವರು ಇಂದು ಸ್ಥಳ ಪರಿಶೀಲನೆಯನ್ನು ನಡೆಸಿದರು.
ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಕೆ.ಆರ್.ಪುರ ಮತ್ತು ವಿಜ್ಞಾನನಗರ ಜಂಕ್ಷನ್ಗಳನ್ನು ಪರಿಶೀಲನೆ ನಡೆಸಿದ ಅಪರ ಆಯುಕ್ತರು ವಿಭಿನ್ನ ರೀತಿಯಲ್ಲಿ ಹಾಗೂ ಸಂಚಾರ ದಟ್ಟಣೆ ಉಂಟಾಗದಂತೆ ವೈಜ್ಞಾನಿಕವಾಗಿ ಜಂಕ್ಷನ್ ಗಳ ಅಭಿವೃದ್ಧಿಪಡಿಸಲು ಸಂಚಾರಿ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಕಾರ್ಯಸಾಧ್ಯತೆ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಅಪರ ಆಯುಕ್ತರು ಸೂಚಿಸಿದರು.
ರಸ್ತೆ ಬದಿಯಲ್ಲಿ ಮತ್ತು ಪಾದಚಾರಿ ಮಾರ್ಗದಲ್ಲಿ ನೆಡಲಾಗಿರುವ ವೃಕ್ಷಗಳ ಸುತ್ತಲೂ ಕಾಂಕ್ರೀಟ್, ಡಾಂಬರು ಹಾಗೂ ಇಂಟರ್ ಲಾಕ್ ಪೇವರ್ ಅಳವಡಿಸುವುದರಿಂದ ಮರಗಳ ಬೇರು ಸದೃಢತೆ ಕಳೆದುಕೊಂಡು ಮಳೆ ಮತ್ತು ಗಾಳಿಯಿಂದಾಗಿ ಉರುಳಿ ಪ್ರಾಣಹಾನಿ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮರಗಳ ಸಂರಕ್ಷಣೆಗಾಗಿ ಮಹತ್ವದ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅಪರ ಆಯುಕ್ತರು ಸೂಚಿಸಿದರು.