state news ಕಪೂರ್ ಮೆಟರ್ನಿಟಿ ಸ್ಟೈಲ್ ವಿವಾದ: 'ಅತಿರೇಕದ ಪ್ರದರ್ಶನ' ಎಂದ ನೆಟ್ಟಿಗರು!
"This is state news"
ಮುಂಬೈ: ಬಾಲಿವುಡ್‌ನ 'ಫ್ಯಾಷನ್ ಐಕಾನ್' ಸೋನಮ್ ಕಪೂರ್ ಮತ್ತೆ ಸುದ್ದಿಯಲ್ಲಿದ್ದಾರೆ. ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಅವರು, ತಮ್ಮ ಲೇಟೆಸ್ಟ್ ಮೆಟರ್ನಿಟಿ ಫೋಟೋಶೂಟ್‌ನಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದ್ದಾರೆ. ಮುಂಬೈನಲ್ಲಿ ಬಿಳಿ ಬಣ್ಣದ ವಿಶೇಷ ವಿನ್ಯಾಸದ ಉಡುಗೆಯಲ್ಲಿ ಕಾಣಿಸಿಕೊಂಡ ಸೋನಮ್, ತಮ್ಮ 'ಬೇಬಿ ಬಂಪ್' ಅನ್ನು ಆತ್ಮವಿಶ್ವಾಸದಿಂದ ಪ್ರದರ್ಶಿಸಿದ್ದಾರೆ. ಅವರ ಈ ಸ್ಟೈಲ್ ಈಗ ಇಂಟರ್ನೆಟ್‌ನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
state news ಸಣ್ಣ ತಪ್ಪು, ಇನ್ನೊಂದು ಜೀವಕ್ಕೆ ಕುತ್ತು: ಸಂಚಾರ ನಿಯಮ ಉಲ್ಲಂಘನೆಯ ಭೀಕರತೆ...ವಿಡಿಯೋ ವೈರಲ್
"This is state news"
ಬೆಂಗಳೂರು: ರಸ್ತೆಯಲ್ಲಿ ತಪ್ಪು ದಿಕ್ಕಿನಲ್ಲಿ ವೇಗವಾಗಿ ಬರುತ್ತಿದ್ದ ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಅಮಾಯಕ ಬೈಕ್ ಸವಾರನೊಬ್ಬ ನಿಯಂತ್ರಣ ತಪ್ಪಿ ಬಸ್ ಅಡಿಗೆ ಸಿಲುಕಿ ದಾರುಣವಾಗಿ ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ. ಸಣ್ಣ ಸಂಚಾರ ನಿಯಮ ಉಲ್ಲಂಘನೆಯೊಂದು ಹೇಗೆ ಇನ್ನೊಬ್ಬರ ಜೀವವನ್ನೇ ಬಲಿ ತೆಗೆದುಕೊಳ್ಳಬಹುದು ಎಂಬುದಕ್ಕೆ ಈ ಘಟನೆ ಮತ್ತೊಂದು ಕರಾಳ ಸಾಕ್ಷಿಯಾಗಿದೆ.
state news ಎಲ್ಲಾ ಧರ್ಮದವರೂ ಇರುವಾಗ ವಂದೇ ಮಾತರಂ ರಾಷ್ಟ್ರಗೀತೆಯಾಗದು : ಹರಿಪ್ರಸಾದ್ ಕಿಡಿ
"This is state news"
ಬೆಂಗಳೂರು: "ಎಲ್ಲಾ ಧರ್ಮದವರೂ ದೇಶದಲ್ಲಿರುವಾಗ ವಂದೇ ಮಾತರಂ ರಾಷ್ಟ್ರಗೀತೆ ಆಗಲು ಸಾಧ್ಯವಿಲ್ಲ" ಎಂದು ಎಂಎಲ್‌ಸಿ ಬಿ. ಕೆ. ಹರಿಪ್ರಸಾದ್ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
state news ಮುಗ್ಧ ಮನವಿ : ಪುಟ್ಟ ಅನಾಬಿಗೆ ಸಿಕ್ಕಿತು ಶಾಲಾ ಪ್ರವೇಶ! ಸಿಎಂ ಜನತಾ ದರ್ಶನದಲ್ಲಿ
"This is state news"
ಲಕ್ನೋ : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ 'ಜನತಾ ದರ್ಶನ' ಕಾರ್ಯಕ್ರಮದಲ್ಲಿ ಸೋಮವಾರ ಒಂದು ಅಪರೂಪದ ಮತ್ತು ಮನಮುಟ್ಟುವ ಘಟನೆ ನಡೆದಿದೆ. ನೂರಾರು ಜನರ ಸಮಸ್ಯೆಗಳ ನಡುವೆ, ಪುಟ್ಟ ಬಾಲಕಿ ಅನಾಬಿ ಅಲಿ ತನ್ನ ಶಾಲಾ ಪ್ರವೇಶದ ಕೋರಿಕೆಯೊಂದಿಗೆ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದು, "ಯೋಗಿ ಅಂಕಲ್, ಸ್ಕೂಲ್ ಅಡ್ಮಿಷನ್ ಮಾಡಿಸಿಕೊಡಿ" ಎಂದು ಮುಗ್ಧವಾಗಿ ಮನವಿ ಮಾಡಿದ್ದಳು. ಆಕೆಯ ಈ ಮನವಿಗೆ ಸಿಎಂ ಯೋಗಿ ತಕ್ಷಣ ಸ್ಪಂದಿಸಿ ಸಿಹಿ ಸುದ್ದಿ ನೀಡಿದ್ದಾರೆ.
state news ಬೆಂಗಳೂರಿನಲ್ಲಿ : ಏಜೆಂಟ್‌ನ 31 ಲಕ್ಷಕ್ಕೂ ಅಧಿಕ ಹಣ ಲೂಟಿ ಬೆಚ್ಚಿಬೀಳಿಸುವ ಸಿನಿಮಾ ಸ್ಟೈಲ್ ದರೋಡೆ
"This is state news"
ಬೆಂಗಳೂರು : ಬೆಂಗಳೂರಿನ ಬನ್ನೇರುಘಟ್ಟ ಸಮೀಪ ಸಿನಿಮಾ ಶೈಲಿಯಲ್ಲಿ ನಡೆದ ದರೋಡೆಯಲ್ಲಿ, ಕ್ಯಾಷ್ ಕಲೆಕ್ಟಿಂಗ್ ಏಜೆಂಟ್ ಒಬ್ಬರಿಗೆ ಲಾಂಗ್ ತೋರಿಸಿ ಬೈಕ್ ಸಮೇತ ಬರೋಬ್ಬರಿ 31 ಲಕ್ಷಕ್ಕೂ ಅಧಿಕ ಹಣವನ್ನು ಲೂಟಿ ಮಾಡಲಾಗಿದೆ. ನಿನ್ನೆ (ಭಾನುವಾರ) ಸಂಜೆ ಈ ಘಟನೆ ನಡೆದಿದ್ದು, ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
state news ಬೆಂಗಳೂರು : ಅಶೋಕ್‌ಗೆ ಸಿದ್ದು ಹಾಸ್ಯ ಚಟಾಕಿ!
"This is state news"
ಬೆಂಗಳೂರು : ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮದ್ಯದ ದರ ಏರಿಕೆ ಕುರಿತು ಚರ್ಚೆ ನಡೆಯುತ್ತಿದ್ದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಪಕ್ಷ ನಾಯಕ ಆರ್. ಅಶೋಕ್ ಅವರನ್ನು ತಮಾಷೆಯಾಗಿ ಕಾಲೆಳೆದರು.
- Read more about state news ಬೆಂಗಳೂರು : ಅಶೋಕ್‌ಗೆ ಸಿದ್ದು ಹಾಸ್ಯ ಚಟಾಕಿ!
- Log in or register to post comments
state news ರಾಹುಲ್ ಗಾಂಧಿ - ಸಂಸತ್ ಅಧಿವೇಶನದಲ್ಲಿ ಕಾಂಗ್ರೆಸ್ ಸಂಸದರು ಹೀಗೇಕೆ ಮಾಡಿದ್ರು?
"This is state news"
ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಇಂದು ತೀವ್ರ ಹೈಡ್ರಾಮಾ ನಡೆದಿದೆ. ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಣೆ ಅವರ ಇನ್ನೂ ಬಿಡುಗಡೆಯಾಗದ ಆತ್ಮಕಥೆಯ ಸಾಲುಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಭದ್ರತೆಯ ಬಗ್ಗೆ ಮಾತನಾಡಲು ಯತ್ನಿಸಿದ ರಾಹುಲ್ ಗಾಂಧಿ, ಸದನದಲ್ಲಿ ಮುಖಭಂಗ ಅನುಭವಿಸಿದ ಪ್ರಸಂಗ ನಡೆಯಿತು.
state news ತಪ್ಪಿದ ದುರಂತ: ಜೀವಕ್ಕಿಂತ ರೀಲ್ಸ್ ದೊಡ್ಡದೇ?..ಬುದ್ಧಿ ಹೇಳಿದ ಚಾಲಕನಿಗೆ ಅಹಂಕಾರದ ಉತ್ತರ
"This is state news"
ನವದೆಹಲಿ : ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಹುಚ್ಚು ಮಿತಿಮೀರಿದೆ. ರೀಲ್ಸ್, ಸೆಲ್ಫಿ ಮತ್ತಿತರ ವಿಡಿಯೊಗಳಿಗಾಗಿ ಕೆಲವರು ಜೀವಕ್ಕೆ ಅಪಾಯ ತರುವಂತಹ ಸಾಹಸಕ್ಕೂ ಮುಂದಾಗುತ್ತಿದ್ದಾರೆ. ಇಂತಹದ್ದೇ ಒಂದು ಘಟನೆ ದೆಹಲಿಯಲ್ಲಿ ನಡೆದಿದ್ದು, ನಡು ರಸ್ತೆಯಲ್ಲೇ ಸೆಲ್ಫಿ ಕ್ಲಿಕ್ಕಿಸಿಕೊಂಡು ರೀಲ್ಸ್ ಮಾಡಲು ಮುಂದಾದ ದಂಪತಿ ನಡು ರಸ್ತೆಯಲ್ಲಿ ಹುಚ್ಚಾಟ ಮೆರೆದಿದ್ದಾರೆ. ಈ ವಿಚಾರಕ್ಕೆ ಬುದ್ಧಿ ಹೇಳಿದ ಕಾರು ಚಾಲಕನ ಜತೆ ವಾಗ್ವಾದ ನಡೆಸಿದ ವಿಡಿಯೊವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
state news ಜವರಾಯನ ಅಟ್ಟಹಾಸ: ಮುಳುಗುತ್ತಿದ್ದವರ ರಕ್ಷಣೆಗೆ ಮುಂದಾದ ಮಹಿಳಾ ಟ್ರಾಫಿಕ್ ಕಾನ್ಸ್‌ಟೇಬಲ್!
"This is state news"
ಬಿಹಾರ : ಬಿಹಾರದ ರಾಜಧಾನಿ ಪಾಟ್ನಾದ ದೀಘಾ ಘಾಟ್‌ನಲ್ಲಿ ಭಾನುವಾರ ಗಂಗಾ ನದಿಯಲ್ಲಿ ಸಂಭವಿಸಿದ ದುರಂತವೊಂದರಲ್ಲಿ ಇಬ್ಬರು ಯುವಕರು ಮುಳುಗಿ ಕಣ್ಮರೆಯಾಗಿದ್ದಾರೆ. ಈ ವೇಳೆ, ತನ್ನ ಜೀವದ ಹಂಗು ತೊರೆದು ನದಿಗೆ ಹಾರಿ, ಮುಳುಗುತ್ತಿದ್ದವರನ್ನು ರಕ್ಷಿಸಲು ಪ್ರಯತ್ನಿಸಿದ ಮಹಿಳಾ ಟ್ರಾಫಿಕ್ ಕಾನ್ಸ್‌ಟೇಬಲ್ ತಾರಾ ಕುಮಾರಿ ಅವರು ಅಪ್ರತಿಮ ಸಾಹಸ ಮೆರೆದಿದ್ದಾರೆ. ಹೌದು ಮಾಘಿ ಪೂರ್ಣಿಮೆಯ ಪವಿತ್ರ ಸ್ನಾನಕ್ಕೆಂದು ಗಂಗಾ ನದಿಗೆ ಭಕ್ತರ ದಂಡೇ ಹರಿದುಬಂದಿತ್ತು. ಈ ಸಂದರ್ಭದಲ್ಲಿ ಗಯಾ ಮೂಲದ 50 ವರ್ಷದ ಗಾರ್ಡ್ ಬಾಬು ಮತ್ತು 30 ವರ್ಷದ ಧನಂಜಯ್ ಕುಮಾರ್ ಎಂಬುವವರು ನದಿಯ ಆಳವಾದ ಭಾಗಕ್ಕೆ ತೆರಳಿ ನೀರಿನ ಸುಳಿಗೆ ಸಿಲುಕಿ ಮುಳುಗತೊಡಗಿದರು. ಇದನ್ನು ಗಮನಿಸಿದ ಟ್ರಾಫಿಕ್ ನಿರ್ವಹಣಾ ಕರ್ತವ್ಯದಲ್ಲಿದ್ದ ಕಾನ್ಸ್‌ಟೇಬಲ್ ತಾರಾ ಕುಮಾರಿ, ತಾನು ಸಮವಸ್ತ್ರದಲ್ಲಿದ್ದೇನೆ ಅಥವಾ ಯಾವುದೇ ಸುರಕ್ಷತಾ ಸಾಧನಗಳಿಲ್ಲ ಎಂಬುದನ್ನು ಲೆಕ್ಕಿಸದೆ, ತಕ್ಷಣವೇ ನದಿಗೆ ಹಾರಿದರು. ತಮ್ಮ ಜೀವದ ಹಂಗು ತೊರೆದು ಮುಳುಗುತ್ತಿದ್ದವರ ರಕ್ಷಣೆಗೆ ಧಾವಿಸಿದ ತಾರಾ ಕುಮಾರಿ ಅವರ ಈ ನಡೆ ಇಡೀ ದೇಶದ ಮೆಚ್ಚುಗೆಗೆ ಪಾತ್ರವಾಗಿದೆ.
state news ಮೀರತ್‌ನಲ್ಲಿ ʻನಮೋ ಭಾರತ್ʼ ಕಾರಿಡಾರ್ ಲೋಕಾರ್ಪಣೆ : ಮೋದಿ ಲಾಂಚ್ ಮಾಡಿದ ಮಹಾ ಯೋಜನೆ
"This is state news"
ಧಾರವಾಡ: ಸವದತ್ತಿ ಯಲ್ಲಮ್ಮ ಗುಡ್ಡಕ್ಕೆ ತೆರಳಿದ ಧಾರವಾಡ ತಾಲೂಕಿನ ಸಲಕಿನಕೋಪ್ಪ ಗ್ರಾಮದ ಚಕ್ಕಡಿಗಳು ಹಾಗೂ ಟ್ರ್ಯಾಕ್ಟರ್ ಮರಳಿ ಗ್ರಾಮಕ್ಕೆ ತೆರಳುವಾಗ ಧಾರವಾಡ ಮುರುಘಾ ಮಠದ ಬಳಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.