Crime Section on app home section for crime
ಸಣ್ಣ ತಪ್ಪು, ಇನ್ನೊಂದು ಜೀವಕ್ಕೆ ಕುತ್ತು: ಸಂಚಾರ ನಿಯಮ ಉಲ್ಲಂಘನೆಯ ಭೀಕರತೆ...ವಿಡಿಯೋ ವೈರಲ್
ಬೆಂಗಳೂರು: ರಸ್ತೆಯಲ್ಲಿ ತಪ್ಪು ದಿಕ್ಕಿನಲ್ಲಿ ವೇಗವಾಗಿ ಬರುತ್ತಿದ್ದ ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಅಮಾಯಕ ಬೈಕ್ ಸವಾರನೊಬ್ಬ ನಿಯಂತ್ರಣ ತಪ್ಪಿ ಬಸ್ ಅಡಿಗೆ ಸಿಲುಕಿ ದಾರುಣವಾಗಿ ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ. ಸಣ್ಣ ಸಂಚಾರ ನಿಯಮ ಉಲ್ಲಂಘನೆಯೊಂದು ಹೇಗೆ ಇನ್ನೊಬ್ಬರ ಜೀವವನ್ನೇ ಬಲಿ ತೆಗೆದುಕೊಳ್ಳಬಹುದು ಎಂಬುದಕ್ಕೆ ಈ ಘಟನೆ ಮತ್ತೊಂದು ಕರಾಳ ಸಾಕ್ಷಿಯಾಗಿದೆ.
VIDEO: ಸೋಲುವ ಭೀತಿ - ಲೈವ್ ಮ್ಯಾಚ್ನಲ್ಲೇ ಪಾಕಿಸ್ತಾನಿ ಜರ್ಸಿ ಬಿಚ್ಚಿ ಭಾರತದ ಜರ್ಸಿ ತೊಟ್ಟ ಅಭಿಮಾನಿ
ಕೊಲೊಂಬೊ: ಮೈದಾನದಲ್ಲಿ ಟೀಮ್ ಇಂಡಿಯಾ ಆಟಗಾರರು ಅಬ್ಬರಿಸುತ್ತಿದ್ದರೆ, ಇತ್ತ ಗ್ಯಾಲರಿಯಲ್ಲಿ ಪಾಕಿಸ್ತಾನಿ ಅಭಿಮಾನಿಗಳ ಪರಿಸ್ಥಿತಿ ಹೇಳತೀರದಾಗಿತ್ತು. ಭಾರತದ ವಿರುದ್ಧ ಪಾಕಿಸ್ತಾನ 61 ರನ್ಗಳ ಭಾರಿ ಸೋಲು ಅನುಭವಿಸುತ್ತಿದ್ದಂತೆ, ಮುಖಭಂಗದಿಂದ ತಪ್ಪಿಸಿಕೊಳ್ಳಲು ಪಾಕ್ ಅಭಿಮಾನಿಗಳು ಪಂದ್ಯದ ಮಧ್ಯದಲ್ಲೇ ತಮ್ಮ ಜರ್ಸಿ ಬದಲಿಸಿದ ತಮಾಷೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ವಿಜಯ್ ದೇವರಕೊಂಡ – ರಶ್ಮಿಕಾ ವೆಡ್ಡಿಂಗ್ ಕಾರ್ಡ್ ವೈರಲ್ : ಮದ್ವೆ ಯಾವಾಗ?
ಸಿನಿಲೋಕದ ಬಹುನಿರೀಕ್ಷಿತ ಜೋಡಿ, ಖ್ಯಾತ ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಅವರ ಮದುವೆ ಆಮಂತ್ರಣ ಪತ್ರಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ.
ಗಂಗೆಯ ಒಡಲಲ್ಲಿ ಜವರಾಯನ ಅಟ್ಟಹಾಸ: ಮುಳುಗುತ್ತಿದ್ದವರ ರಕ್ಷಣೆಗೆ ಮುಂದಾದ ಮಹಿಳಾ ಟ್ರಾಫಿಕ್ ಕಾನ್ಸ್ಟೇಬಲ್!
ಬಿಹಾರ : ಬಿಹಾರದ ರಾಜಧಾನಿ ಪಾಟ್ನಾದ ದೀಘಾ ಘಾಟ್ನಲ್ಲಿ ಭಾನುವಾರ ಗಂಗಾ ನದಿಯಲ್ಲಿ ಸಂಭವಿಸಿದ ದುರಂತವೊಂದರಲ್ಲಿ ಇಬ್ಬರು ಯುವಕರು ಮುಳುಗಿ ಕಣ್ಮರೆಯಾಗಿದ್ದಾರೆ. ಈ ವೇಳೆ, ತನ್ನ ಜೀವದ ಹಂಗು ತೊರೆದು ನದಿಗೆ ಹಾರಿ, ಮುಳುಗುತ್ತಿದ್ದವರನ್ನು ರಕ್ಷಿಸಲು ಪ್ರಯತ್ನಿಸಿದ ಮಹಿಳಾ ಟ್ರಾಫಿಕ್ ಕಾನ್ಸ್ಟೇಬಲ್ ತಾರಾ ಕುಮಾರಿ ಅವರು ಅಪ್ರತಿಮ ಸಾಹಸ ಮೆರೆದಿದ್ದಾರೆ. ಹೌದು ಮಾಘಿ ಪೂರ್ಣಿಮೆಯ ಪವಿತ್ರ ಸ್ನಾನಕ್ಕೆಂದು ಗಂಗಾ ನದಿಗೆ ಭಕ್ತರ ದಂಡೇ ಹರಿದುಬಂದಿತ್ತು. ಈ ಸಂದರ್ಭದಲ್ಲಿ ಗಯಾ ಮೂಲದ 50 ವರ್ಷದ ಗಾರ್ಡ್ ಬಾಬು ಮತ್ತು 30 ವರ್ಷದ ಧನಂಜಯ್ ಕುಮಾರ್ ಎಂಬುವವರು ನದಿಯ ಆಳವಾದ ಭಾಗಕ್ಕೆ ತೆರಳಿ ನೀರಿನ ಸುಳಿಗೆ ಸಿಲುಕಿ ಮುಳುಗತೊಡಗಿದರು. ಇದನ್ನು ಗಮನಿಸಿದ ಟ್ರಾಫಿಕ್ ನಿರ್ವಹಣಾ ಕರ್ತವ್ಯದಲ್ಲಿದ್ದ ಕಾನ್ಸ್ಟೇಬಲ್ ತಾರಾ ಕುಮಾರಿ, ತಾನು ಸಮವಸ್ತ್ರದಲ್ಲಿದ್ದೇನೆ ಅಥವಾ ಯಾವುದೇ ಸುರಕ್ಷತಾ ಸಾಧನಗಳಿಲ್ಲ ಎಂಬುದನ್ನು ಲೆಕ್ಕಿಸದೆ, ತಕ್ಷಣವೇ ನದಿಗೆ ಹಾರಿದರು. ತಮ್ಮ ಜೀವದ ಹಂಗು ತೊರೆದು ಮುಳುಗುತ್ತಿದ್ದವರ ರಕ್ಷಣೆಗೆ ಧಾವಿಸಿದ ತಾರಾ ಕುಮಾರಿ ಅವರ ಈ ನಡೆ ಇಡೀ ದೇಶದ ಮೆಚ್ಚುಗೆಗೆ ಪಾತ್ರವಾಗಿದೆ.
VIDEO : ಮೈ ಜುಮ್ಮೆನಿಸುವ ದೃಶ್ಯ - ಬಾಲಕಿ ಮೇಲೆ ಹಸುವಿನ ಭೀಕರ ದಾಳಿ, ಸಿಸಿಟಿವಿಯಲ್ಲಿ ಸೆರೆ!
ಲಖನೌ : ಚೌಪತಿಯಾ ಕಾಲೋನಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಬಾಲಕಿಯೊಬ್ಬಳ ಮೇಲೆ ಹಸುವೊಂದು ಭೀಕರವಾಗಿ ದಾಳಿ ಮಾಡಿ ತುಳಿದಿದ್ದು, ಈ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸೋನಮ್ ಕಪೂರ್ ಮೆಟರ್ನಿಟಿ ಸ್ಟೈಲ್ ವಿವಾದ: 'ಅತಿರೇಕದ ಪ್ರದರ್ಶನ' ಎಂದ ನೆಟ್ಟಿಗರು!
ಬೆಂಗಳೂರು : ಬೆಂಗಳೂರಿನ ಬನ್ನೇರುಘಟ್ಟ ಸಮೀಪ ಸಿನಿಮಾ ಶೈಲಿಯಲ್ಲಿ ನಡೆದ ದರೋಡೆಯಲ್ಲಿ, ಕ್ಯಾಷ್ ಕಲೆಕ್ಟಿಂಗ್ ಏಜೆಂಟ್ ಒಬ್ಬರಿಗೆ ಲಾಂಗ್ ತೋರಿಸಿ ಬೈಕ್ ಸಮೇತ ಬರೋಬ್ಬರಿ 31 ಲಕ್ಷಕ್ಕೂ ಅಧಿಕ ಹಣವನ್ನು ಲೂಟಿ ಮಾಡಲಾಗಿದೆ. ನಿನ್ನೆ (ಭಾನುವಾರ) ಸಂಜೆ ಈ ಘಟನೆ ನಡೆದಿದ್ದು, ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂದು ಸಣ್ಣ ತಪ್ಪು, ಇನ್ನೊಂದು ಜೀವಕ್ಕೆ ಕುತ್ತು: ಸಂಚಾರ ನಿಯಮ ಉಲ್ಲಂಘನೆಯ ಭೀಕರತೆ...ವಿಡಿಯೋ ವೈರಲ್
ಬೆಂಗಳೂರು : ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮದ್ಯದ ದರ ಏರಿಕೆ ಕುರಿತು ಚರ್ಚೆ ನಡೆಯುತ್ತಿದ್ದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಪಕ್ಷ ನಾಯಕ ಆರ್. ಅಶೋಕ್ ಅವರನ್ನು ತಮಾಷೆಯಾಗಿ ಕಾಲೆಳೆದರು.
ಪ್ರತಿಕ್ರಿಯೆಗಳು
ಪ್ರಾಥಮಿಕ ತನಿಖೆಯ ಪ್ರಕಾರ, ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.
ಉತ್ತರ ಪ್ರದೇಶದ ಮೀರತ್ನಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೆಹಲಿಯಲ್ಲಿ ನಡೆದ ಎಐ (AI) ಶೃಂಗಸಭೆಯಲ್ಲಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯನ್ನು ತೀವ್ರವಾಗಿ ಖಂಡಿಸಿದರು. "ದೇಶವನ್ನು ಹಾಳುಮಾಡಲು ಕಾಂಗ್ರೆಸ್ ಪಣತೊಟ್ಟಿದೆ"ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು. ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸಿದ್ದಾರೆ.
.
ತಲೆ ಮತ್ತು ದೇಹದ ಇತರೆ ಭಾಗಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಅವರು ಇದೀಗ ಹೊಸ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಇತ್ತೀಚೆಗೆ ಯುವಜನತೆಯ ಕಾರ್ಯಕ್ರಮವೊಂದರಲ್ಲಿ ಅವರು ನೀಡಿದ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿವೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ರಿಜ್ವಾನ್, 'ನಾವು ಇಲ್ಲಿರುವುದು ಒಂದು ಉದ್ದೇಶಕ್ಕಾಗಿ - ನಮಗೆ ಧರ್ಮವೇ ಮೊದಲು, ವೃತ್ತಿ ಆಮೇಲೆ' ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, 'ಮುಸ್ಲಿಮರನ್ನು ಈ ಜಗತ್ತಿಗೆ ನಾಯಕತ್ವಕ್ಕಾಗಿ ತರಲಾಗಿದೆ, ಗುಲಾಮಗಿರಿಗಾಗಿ ಅಲ್ಲ' ಎಂಬ ಗಂಭೀರ ಹೇಳಿಕೆ ನೀಡಿದ್ದಾರೆ. ಈ ವಿಡಿಯೋ ಕ್ಲಿಪ್ ಇದೀಗ ಅಂತರ್ಜಾಲದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ರಿಜ್ವಾನ್ ಅವರ ಈ ಮಾತುಗಳಿಗೆ ಕ್ರಿಕೆಟ್ ಅಭಿಮಾನಿಗಳು ಮತ್ತು ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದು ವರ್ಗದ ಜನರು ಅವರ ಹೇಳಿಕೆಗಳನ್ನು 'ಧರ್ಮದ ಮೇಲಿರುವ ಅಚಲ ನಂಬಿಕೆ ಮತ್ತು ಸ್ಫೂರ್ತಿದಾಯಕ ಮಾತು' ಎಂದು ಬಣ್ಣಿಸಿದ್ದಾರೆ. ವೃತ್ತಿಪರ ಬದುಕಿನಲ್ಲಿ ಧರ್ಮಕ್ಕೆ ಆದ್ಯತೆ ನೀಡುವುದು ವೈಯಕ್ತಿಕ ಆಯ್ಕೆ ಎಂದು ಸಮರ್ಥಿಸಿಕೊಂಡಿದ್ದಾರೆ.
- Read more about ತಲೆ ಮತ್ತು ದೇಹದ ಇತರೆ ಭಾಗಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.
- Log in or register to post comments
state news ಸಿಎಂ ಜನತಾ ದರ್ಶನದಲ್ಲಿ ಮುಗ್ಧ ಮನವಿ : ಪುಟ್ಟ ಅನಾಬಿಗೆ ಸಿಕ್ಕಿತು ಶಾಲಾ ಪ್ರವೇಶ!
"This is state news"
ಲಕ್ನೋ : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ 'ಜನತಾ ದರ್ಶನ' ಕಾರ್ಯಕ್ರಮದಲ್ಲಿ ಸೋಮವಾರ ಒಂದು ಅಪರೂಪದ ಮತ್ತು ಮನಮುಟ್ಟುವ ಘಟನೆ ನಡೆದಿದೆ. ನೂರಾರು ಜನರ ಸಮಸ್ಯೆಗಳ ನಡುವೆ, ಪುಟ್ಟ ಬಾಲಕಿ ಅನಾಬಿ ಅಲಿ ತನ್ನ ಶಾಲಾ ಪ್ರವೇಶದ ಕೋರಿಕೆಯೊಂದಿಗೆ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದು, "ಯೋಗಿ ಅಂಕಲ್, ಸ್ಕೂಲ್ ಅಡ್ಮಿಷನ್ ಮಾಡಿಸಿಕೊಡಿ" ಎಂದು ಮುಗ್ಧವಾಗಿ ಮನವಿ ಮಾಡಿದ್ದಳು. ಆಕೆಯ ಈ ಮನವಿಗೆ ಸಿಎಂ ಯೋಗಿ ತಕ್ಷಣ ಸ್ಪಂದಿಸಿ ಸಿಹಿ ಸುದ್ದಿ ನೀಡಿದ್ದಾರೆ.