state news VIDEO: ಸೋಲುವ ಭೀತಿ - ಲೈವ್ ಮ್ಯಾಚ್‌ನಲ್ಲೇ ಪಾಕಿಸ್ತಾನಿ ಜರ್ಸಿ ಬಿಚ್ಚಿ ಭಾರತದ ಜರ್ಸಿ ತೊಟ್ಟ ಅಭಿಮಾನಿ
"This is state news"
ಕೊಲೊಂಬೊ: ಮೈದಾನದಲ್ಲಿ ಟೀಮ್ ಇಂಡಿಯಾ ಆಟಗಾರರು ಅಬ್ಬರಿಸುತ್ತಿದ್ದರೆ, ಇತ್ತ ಗ್ಯಾಲರಿಯಲ್ಲಿ ಪಾಕಿಸ್ತಾನಿ ಅಭಿಮಾನಿಗಳ ಪರಿಸ್ಥಿತಿ ಹೇಳತೀರದಾಗಿತ್ತು. ಭಾರತದ ವಿರುದ್ಧ ಪಾಕಿಸ್ತಾನ 61 ರನ್‌ಗಳ ಭಾರಿ ಸೋಲು ಅನುಭವಿಸುತ್ತಿದ್ದಂತೆ, ಮುಖಭಂಗದಿಂದ ತಪ್ಪಿಸಿಕೊಳ್ಳಲು ಪಾಕ್ ಅಭಿಮಾನಿಗಳು ಪಂದ್ಯದ ಮಧ್ಯದಲ್ಲೇ ತಮ್ಮ ಜರ್ಸಿ ಬದಲಿಸಿದ ತಮಾಷೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
state news ವಿಜಯ್ ದೇವರಕೊಂಡ – ರಶ್ಮಿಕಾ ವೆಡ್ಡಿಂಗ್ ಕಾರ್ಡ್ ವೈರಲ್ : ಮದ್ವೆ ಯಾವಾಗ?
"This is state news"
ಸಿನಿಲೋಕದ ಬಹುನಿರೀಕ್ಷಿತ ಜೋಡಿ, ಖ್ಯಾತ ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಅವರ ಮದುವೆ ಆಮಂತ್ರಣ ಪತ್ರಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ.
state news ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್
"This is state news"
ಬೆಂಗಳೂರು : ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್. ಎನ್. ಸುಬ್ಬಾರೆಡ್ಡಿ ಆಯ್ಕೆಯನ್ನು ಕರ್ನಾಟಕ ಹೈಕೋರ್ಟ್ ಅಸಿಂಧುಗೊಳಿಸಿ ಆದೇಶ ಹೊರಡಿಸಿದೆ. ಆಸ್ತಿ ವಿವರಗಳನ್ನು ಮುಚ್ಚಿಟ್ಟು ಸುಳ್ಳು ಪ್ರಮಾಣಪತ್ರ ಸಲ್ಲಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ಮಹತ್ವದ ತೀರ್ಪು ಹೊರಬಿದ್ದಿದೆ.
state news ಜರ್ಮನ್ ನೆಲದಲ್ಲಿ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್‌ಗೆ ಭಾರೀ ಮುಜುಗರ - ವಿಡಿಯೋ ವೈರಲ್!
"This is state news"
ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಜರ್ಮನಿಯಲ್ಲಿ ಭಾರೀ ಮುಜುಗರ ಅನುಭವಿಸಿದ್ದಾರೆ. ಮ್ಯೂನಿಕ್ ಭದ್ರತಾ ಸಮ್ಮೇಳನದಲ್ಲಿ (MSC) ಭಾಗವಹಿಸಲು ಬಂದಿದ್ದ ಮುನೀರ್ ಅವರನ್ನು ಭದ್ರತಾ ಸಿಬ್ಬಂದಿ ತಡೆದು ಐಡಿ ಕಾರ್ಡ್‌ಗಾಗಿ ಪ್ರಶ್ನಿಸಿದ್ದಾರೆ.
state news ಬೆಂಗಳೂರು: RCB ದುರಂತಕ್ಕೆ ಡಿಕೆ ಕಾರಣ ಅಂತ ವಿಡಂಬನಾತ್ಮಕ ವಿಡಿಯೋ!
"This is state news"
ಬೆಂಗಳೂರು: ಬಿಜೆಪಿಯಿಂದ ವಿವಾದಾತ್ಮಕ AI ವಿಡಿಯೋ ಬಿಡುಗಡೆ ಮಾಡಲಾಗಿದೆ. ಚಿನ್ನಸ್ವಾಮಿ ದುರಂತಕ್ಕೆ ಡಿಕೆಶಿ ನೇರ ಕಾರಣವೆಂದು ವಿಡಿಯೋದಲ್ಲಿ ಆರೋಪ ಮಾಡಲಾಗಿದೆ. ಡಿಕೆಶಿಯ ಫೋಟೊ, ರೀಲ್ಸ್ ಹುಚ್ಚಿಗೆ 11 ಅಮಾಯಕ ಜನರ ಸಾವಾಯ್ತು ಎಂದು ಆರೋಪ ಮಾಡಲಾಗಿದೆ.
state news ಡಾ. ಸಿ.ಜೆ. ಐಷರಾಮಿ ಕಾರ್ ಕಲೆಕ್ಷನ್ ನೋಡಿ!
"This is state news"
ಬೆಂಗಳೂರು: ಸಾವಿರಾರು ಕೋಟಿ ಒಡೆಯ, ಐಷಾರಾಮಿ ಬದುಕಿಗೆ ಹೆಸರಾಗಿದ್ದ ಕಾನ್ಫಿಡೆಂಟ್ ಗ್ರೂಪ್‌ನ ಮಾಲೀಕ ಡಾ. ಸಿ.ಜೆ. ರಾಯ್ ತಮ್ಮ ಜೀವನದ ಪಯಣವನ್ನು ತಾವೇ ಅಂತ್ಯಗೊಳಿಸಿದ್ದಾರೆ. ಲಭ್ಯ ಮಾಹಿತಿಯ ಪ್ರಕಾರ, ಆದಾಯ ತೆರಿಗೆ (IT) ಅಧಿಕಾರಿಗಳು ಕಾನ್ಫಿಡೆಂಟ್ ಗ್ರೂಪ್ ಕಚೇರಿಯ ಮೇಲೆ ದಾಳಿ ನಡೆಸಿದ್ದರು. ವಿಚಾರಣೆ ವೇಳೆ, “ದಾಖಲೆಗಳನ್ನು ತರುತ್ತೇನೆ” ಎಂದು ಒಳ ಹೋದ ಸಿ.ಜೆ. ರಾಯ್, ತಮ್ಮಲ್ಲಿದ್ದ ಬಂದೂಕಿನಿಂದ ಎದೆಗೆ ಗುಂಡು ಹಾರಿಸಿಕೊಂಡಿದ್ದಾರೆ.
- Read more about state news ಡಾ. ಸಿ.ಜೆ. ಐಷರಾಮಿ ಕಾರ್ ಕಲೆಕ್ಷನ್ ನೋಡಿ!
- Log in or register to post comments
state news ಜನರ ಮೆಚ್ಚುಗೆಗಾಗಿ ಈ ಬಜೆಟ್ ಮಂಡಿಸಿದಂತಿದೆ
"This is state news"
ನವದೆಹಲಿ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ ಕೇಂದ್ರ ಆಯವ್ಯಯದ ಬಗ್ಗೆ ನಮ್ಮ ರಾಜ್ಯವನ್ನು ಪ್ರತಿನಿಧಿಸುವ ಕಾಂಗ್ರೆಸ್ ಸಂಸದರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಬಹುತೇಕರು ಇದೊಂದು ಸಾರವಿಲ್ಲದ ಬಜೆಟ್ ಎಂದಿದ್ದಾರೆ. ಬನ್ನಿ ಅವರ ಮಾತಲ್ಲೇ ಕೇಳೋಣ.
- Read more about state news ಜನರ ಮೆಚ್ಚುಗೆಗಾಗಿ ಈ ಬಜೆಟ್ ಮಂಡಿಸಿದಂತಿದೆ
- Log in or register to post comments
state news ರಾಯ್ ಆತ್ಮಹತ್ಯೆ ಕೇಸ್ : ಸಾವಿಗೂ ಮುನ್ನ ಮನೋವೈದ್ಯರ ಕೌನ್ಸೆಲಿಂಗ್, ಹೊರಬಿದ್ದ ಸ್ಫೋಟಕ ಮಾಹಿತಿ!
"This is state news"
ಬೆಂಗಳೂರು : ಕಾನ್‌ಫಿಡೆಂಟ್ ಗ್ರೂಪ್‌ನ ಸಂಸ್ಥಾಪಕ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ಹೊಸ ಆಯಾಮ ಪಡೆಯುತ್ತಿದೆ. ಆದಾಯ ತೆರಿಗೆ ಇಲಾಖೆಯ ತನಿಖೆ ನಡೆಯುತ್ತಿದ್ದಾಗಲೇ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ ಅವರ ಸುತ್ತ ಹಲವು ಅನುಮಾನಗಳು ಸುಳಿದಾಡುತ್ತಿವೆ. ಈ ಮಧ್ಯೆ, ರಾಯ್ ಅವರ ಸಾವಿಗೆ ಮಾನಸಿಕ ಸ್ಥಿತಿಯೇ ಕಾರಣವೇ ಎಂಬ ಪ್ರಶ್ನೆಗೆ ಪುಷ್ಠಿ ನೀಡುವ ಸ್ಫೋಟಕ ಮಾಹಿತಿ ಇದೀಗ ಬಹಿರಂಗವಾಗಿದೆ. ಅವರು ಕಳೆದ ಹಲವು ದಿನಗಳಿಂದ ಮನೋವೈದ್ಯರಿಂದ ಕೌನ್ಸೆಲಿಂಗ್ ಪಡೆಯುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.
state news ಆಮದು ಸುಂಕ ಇಳಿಕೆ - ಮೋದಿಯೊಂದಿಗೆ ಮಾತುಕತೆ ನಂತರ ಟ್ರಂಪ್ ಘೋಷಣೆ
"This is state news"
ಇಂದು ಬೆಳಿಗ್ಗೆ ಭಾರತದ ಪ್ರಧಾನಿ ಮೋದಿಯವರೊಂದಿಗೆ ಮಾತನಾಡಲು ನನಗೆ ಹೆಮ್ಮೆ ಎನಿಸಿದೆ. ಅವರು ನನ್ನ ಆತ್ಮೀಯ ಸ್ನೇಹಿತರಲ್ಲಿ ಒಬ್ಬರು ಮತ್ತು ಅವರು ತಮ್ಮ ದೇಶದ ಪ್ರಭಾವಶಾಲಿ ಮತ್ತು ಗೌರವಾನ್ವಿತ ನಾಯಕ. ವ್ಯಾಪಾರ, ರಷ್ಯಾ ಮತ್ತು ಉಕ್ರೇನ್‌ನೊಂದಿಗಿನ ಯುದ್ಧವನ್ನು ಕೊನೆಗೊಳಿಸುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ನಾವು ಮಾತನಾಡಿದ್ದೇವೆ. ರಷ್ಯಾದ ತೈಲವನ್ನು ಖರೀದಿಸುವುದನ್ನು ನಿಲ್ಲಿಸಲು ಮತ್ತು ಯುನೈಟೆಡ್ ಸ್ಟೇಟ್ಸ್ ಮತ್ತು ಬಹುಶಃ ವೆನೆಜುವೆಲಾದಿಂದ ಹೆಚ್ಚಿನದನ್ನು ಖರೀದಿಸಲು ಅವರು ಒಪ್ಪಿಕೊಂಡರು. ಇದು ಉಕ್ರೇನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸಲು ಸಹಾಯ ಮಾಡುತ್ತದೆ.
**Key Highlights:**
- An unnamed global leader conversed with **Indian Prime Minister Narendra Modi**.
- Discussions included trade and efforts to end the **Russia-Ukraine** war.
- **PM Modi** agreed to halt **Russian** oil purchases.
- **India** plans to increase oil imports from the **United States** and potentially **Venezuela**.
- This move is intended to aid in ending the conflict in **Ukraine**.
state news ಜನತಾ ದರ್ಶನದಲ್ಲಿ ಮುಗ್ಧ ಮನವಿ : ಪುಟ್ಟ ಅನಾಬಿಗೆ ಸಿಕ್ಕಿತು ಶಾಲಾ ಪ್ರವೇಶ!
"This is state news"
ಲಕ್ನೋ : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ 'ಜನತಾ ದರ್ಶನ' ಕಾರ್ಯಕ್ರಮದಲ್ಲಿ ಸೋಮವಾರ ಒಂದು ಅಪರೂಪದ ಮತ್ತು ಮನಮುಟ್ಟುವ ಘಟನೆ ನಡೆದಿದೆ. ನೂರಾರು ಜನರ ಸಮಸ್ಯೆಗಳ ನಡುವೆ, ಪುಟ್ಟ ಬಾಲಕಿ ಅನಾಬಿ ಅಲಿ ತನ್ನ ಶಾಲಾ ಪ್ರವೇಶದ ಕೋರಿಕೆಯೊಂದಿಗೆ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದು, "ಯೋಗಿ ಅಂಕಲ್, ಸ್ಕೂಲ್ ಅಡ್ಮಿಷನ್ ಮಾಡಿಸಿಕೊಡಿ" ಎಂದು ಮುಗ್ಧವಾಗಿ ಮನವಿ ಮಾಡಿದ್ದಳು. ಆಕೆಯ ಈ ಮನವಿಗೆ ಸಿಎಂ ಯೋಗಿ ತಕ್ಷಣ ಸ್ಪಂದಿಸಿ ಸಿಹಿ ಸುದ್ದಿ ನೀಡಿದ್ದಾರೆ.