ಸರ್ಕಾರ ವಿರುದ್ಧ ವೈದ್ಯರ ಆಕ್ರೋಶ : ಮಾ.11 ರಿಂದ ಒಪಿಡಿ ಸೇವೆ ಬಂದ್
ಬೆಂಗಳೂರು: ರಾಜ್ಯದಲ್ಲಿ ಮುಂದಿನ ತಿಂಗಳು ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗುವ ಲಕ್ಷಣಗಳು ಕಾಣಿಸಿಕೊಂಡಿದ್ದು, ಸರ್ಕಾರದ ವಿರುದ್ಧ ವೈದ್ಯರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಔಷಧ ಪೂರೈಕೆ, ವೈದ್ಯರ ನೇಮಕ, ಬಡ್ತಿ ಮತ್ತು ವರ್ಗಾವಣೆ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಮಾರ್ಚ್ 11ರಿಂದ ರಾಜ್ಯವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಸುಪ್ರೀಂ ತೀರ್ಪು ಧಿಕ್ಕರಿಸಿ ಟ್ರಂಪ್ ಹೊಸ ಬೆದರಿಕೆ: ಆಟವಾಡಿದರೆ ಭಾರಿ ಸುಂಕ!
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಾಗತಿಕವಾಗಿ ವಿಧಿಸಿದ್ದ ಸುಂಕ ನೀತಿಯನ್ನು ಸುಪ್ರೀಂ ಕೋರ್ಟ್ ಕಾನೂನುಬಾಹಿರ ಎಂದು ರದ್ದುಪಡಿಸಿದ ಬೆನ್ನಲ್ಲೇ, ಟ್ರಂಪ್ ಹೊಸ ಬೆದರಿಕೆ ಹಾಕಿದ್ದಾರೆ.
ಈ ತೀರ್ಪನ್ನು ಮುಂದಿಟ್ಟುಕೊಂಡು ಯಾರಾದರೂ ವ್ಯಾಪಾರ ಒಪ್ಪಂದಗಳ ವಿಷಯದಲ್ಲಿ ಆಟವಾಡಲು ಪ್ರಯತ್ನಿಸಿದರೆ, ಭಾರಿ ಪ್ರಮಾಣದ ಹಾಗೂ ಅತ್ಯಂತ ಕಠಿಣ ಸುಂಕಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಶುಕ್ರವಾರ, ಅಮೆರಿಕ ಸುಪ್ರೀಂ ಕೋರ್ಟ್ 6-3ರ ಬಹುಮತದ ತೀರ್ಪು ನೀಡಿ, ಅಧ್ಯಕ್ಷರು ತಮ್ಮ ಕಾನೂನು ಅಧಿಕಾರವನ್ನು ಅತಿಕ್ರಮಿಸಿದ್ದಾರೆ ಎಂದು ಹೇಳಿತ್ತು. ಅಮೆರಿಕ ಕಾಂಗ್ರೆಸ್ ಅನುಮೋದನೆ ಪಡೆಯದೆ ಸುಂಕ ಹೇರಿಕೆ ತಪ್ಪು ಎಂದು ಸ್ಪಷ್ಟಪಡಿಸಿತ್ತು. ಈ ತೀರ್ಪಿನ ಕೆಲವು ಗಂಟೆಗಳ ನಂತರ, ಟ್ರಂಪ್ ವಿದೇಶಿ ಸರಕುಗಳ ಮೇಲೆ ಶೇ.10ರಷ್ಟು ಜಾಗತಿಕ ಸುಂಕವನ್ನು ವಿಧಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದರು. ನಂತರ ಅದನ್ನು ಶೇ.15ಕ್ಕೆ ಏರಿಸಿದ್ದರು.