ಪ್ರಾಥಮಿಕ ತನಿಖೆಯ ಪ್ರಕಾರ, ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.
ಉತ್ತರ ಪ್ರದೇಶದ ಮೀರತ್‌ನಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೆಹಲಿಯಲ್ಲಿ ನಡೆದ ಎಐ (AI) ಶೃಂಗಸಭೆಯಲ್ಲಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯನ್ನು ತೀವ್ರವಾಗಿ ಖಂಡಿಸಿದರು. "ದೇಶವನ್ನು ಹಾಳುಮಾಡಲು ಕಾಂಗ್ರೆಸ್ ಪಣತೊಟ್ಟಿದೆ"ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು. ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸಿದ್ದಾರೆ.
.
ರಾಹುಲ್ ಗಾಂಧಿ ನಾಯಕತ್ವ ಕಾಂಗ್ರೆಸ್ ಪಕ್ಷದ ದುರ್ಬಲತೆಗೆ ಕಾರಣ - ಮಣಿಶಂಕರ್ ಅಯ್ಯರ್
ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ತಮ್ಮದೇ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಕಾಂಗ್ರೆಸ್ ಹೈಕಮಾಂಡ್‌ಗೆ ಮತ್ತೊಮ್ಮೆ ಮುಜುಗರ ತಂದಿದ್ದಾರೆ. ‘ಇಂಡಿಯಾ’ ಮೈತ್ರಿಕೂಟದ ನಾಯಕತ್ವ ಸ್ಥಾನದಿಂದ ರಾಹುಲ್ ಗಾಂಧಿ ಕೆಳಗಿಳಿಯಬೇಕು ಎಂದು ನೇರವಾಗಿ ಒತ್ತಾಯಿಸಿರುವ ಅಯ್ಯರ್, ಅವರ ನಾಯಕತ್ವದ ಸಾಮರ್ಥ್ಯವನ್ನೇ ಪ್ರಶ್ನಿಸಿದ್ದಾರೆ.
BREAKING: ಸಚಿವ ಸಂಪುಟ ಪುನರ್‌ರಚನೆಗೆ 31 ಶಾಸಕರ ಒತ್ತಾಯ : ಹೈಕಮಾಂಡ್‌ಗೆ ಬಿಸಿ ತಟ್ಟಿದ ಪತ್ರ!
ಬೆಂಗಳೂರು: ರಾಜ್ಯದಲ್ಲಿ ಸಂಪುಟ ಪುನರ್ ರಚನೆಗೆ ಕಾಂಗ್ರೆಸ್ ಪಾಳೆಯದಲ್ಲಿ ಒತ್ತಡ ಹೆಚ್ಚಾಗಿದ್ದು, ೩೧ ಶಾಸಕರು ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ. ಈ ಬೆಳವಣಿಗೆಯು ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸುತ್ತಿನ ಚರ್ಚೆಗೆ ನಾಂದಿ ಹಾಡಿದೆ.
ಮತದಾರರ ಪಟ್ಟಿ ಪರಿಷ್ಕರಣೆ : ತಮಿಳುನಾಡಿನಲ್ಲಿ 97 ಲಕ್ಷ ಮತದಾರರ ಹೆಸರು ಡಿಲೀಟ್
ಚೆನ್ನೈ: ತಮಿಳುನಾಡಿನಲ್ಲಿ ವಿಶೇಷ ತೀವ್ರ ಪರಿಷ್ಕರಣೆ, ಅಂದರೆ SIR ಪ್ರಕ್ರಿಯೆ ನಂತರದ ಅಂತಿಮ ಮತದಾರರ ಪಟ್ಟಿಯನ್ನು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಅರ್ಚನಾ ಪಟ್ನಾಯಕ್ ಅವರು ಇಂದು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಈ ಅಂತಿಮ ಪಟ್ಟಿಯಂತೆ, ರಾಜ್ಯದಲ್ಲಿ ಒಟ್ಟು 5 ಕೋಟಿ 67 ಲಕ್ಷಕ್ಕೂ ಅಧಿಕ ಮತದಾರರು ಇದ್ದು, ಇದರಲ್ಲಿ 2.89 ಕೋಟಿ ಮಹಿಳೆಯರು ಮತ್ತು 2.77 ಕೋಟಿ ಪುರುಷ ಮತದಾರರು ಸೇರಿದ್ದಾರೆ.
590 ಕೋಟಿ ರೂ. ಅಕ್ರಮ ನಡೆದಿರುವುದು ದೃಢಪಟ್ಟಿದೆ.
ಸರ್ಕಾರಿ ಇಲಾಖೆಯ ಪುಸ್ತಕಗಳಲ್ಲಿ ನಮೂದಿಸಲಾದ ಮೊತ್ತಕ್ಕೂ ಬ್ಯಾಂಕ್ ಖಾತೆಯಲ್ಲಿನ ವಾಸ್ತವ ಬ್ಯಾಲೆನ್ಸ್‌ಗೂ ಹೊಂದಾಣಿಕೆಯಾಗದಿರುವುದು ಈ ವಂಚನೆಯ ಮೂಲ. ಮೊತ್ತದಲ್ಲಿನ ಭಾರಿ ವ್ಯತ್ಯಾಸದಿಂದಾಗಿ, ಇಲಾಖೆಯು ತನ್ನ ಬ್ಯಾಂಕ್ ಖಾತೆಯನ್ನು ಮುಚ್ಚಿ ಬೇರೆಡೆಗೆ ವರ್ಗಾಯಿಸಲು ಮನವಿ ಮಾಡಿದಾಗ ಈ ವಂಚನೆಯ ಸುಳಿವು ಸಿಕ್ಕಿದೆ.
ಫೆಬ್ರವರಿ 18 ರಿಂದ, ಹರಿಯಾಣದ ಹಲವಾರು ಸರ್ಕಾರಿ ಇಲಾಖೆಗಳು ತಮ್ಮ ಖಾತೆಗಳಲ್ಲೂ ಇದೇ ರೀತಿಯ ಸಮಸ್ಯೆ ಎದುರಾಗಿದೆ ಎಂದು ದೂರು ನೀಡಿವೆ. ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ನಡೆಸಿದ ಸಮಗ್ರ ಪರಿಶೀಲನೆಯಲ್ಲಿ ಒಟ್ಟು 590 ಕೋಟಿ ರೂ. ಅಕ್ರಮ ನಡೆದಿರುವುದು ದೃಢಪಟ್ಟಿದೆ.
- Read more about 590 ಕೋಟಿ ರೂ. ಅಕ್ರಮ ನಡೆದಿರುವುದು ದೃಢಪಟ್ಟಿದೆ.
- Log in or register to post comments
ಸರ್ಕಾರಿ ಖಾತೆಯಲ್ಲೇ 590 ಕೋಟಿ ರೂ. ಮಾಯ - ಬ್ಯಾಂಕ್ ಉದ್ಯೋಗಿಗಳ ಕೈವಾಡ ಬಯಲು!
ಹರಿಯಾಣ ಸರ್ಕಾರದ ಇಲಾಖೆಗಳ ಖಾತೆಯಲ್ಲಿ ಸುಮಾರು 590 ಕೋಟಿ ರೂ. ಮೊತ್ತದ ಬೃಹತ್ ವಂಚನೆ ಬೆಳಕಿಗೆ ಬಂದಿದೆ. ಈ ಪ್ರಕರಣದ ಕುರಿತು ಬ್ಯಾಂಕ್ ತನಿಖೆಯನ್ನು ಆರಂಭಿಸಿದೆ.
ಸರ್ಕಾರಿ ನೌಕರರ ಸಂಘವೂ ಸಂಪೂರ್ಣ ಬೆಂಬಲ ಘೋಷಿಸಿದ್ದು, ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ.
ವೈದ್ಯರ ನೇಮಕದಲ್ಲಿ ವಿಳಂಬ, ಔಷಧ ಕೊರತೆ ಮತ್ತು ಆಡಳಿತ ವೈಫಲ್ಯವೇ ಈ ಹೋರಾಟಕ್ಕೆ ಕಾರಣ ಎಂದು ಸಂಘದ ಅಧ್ಯಕ್ಷ ಡಾ. ರವೀಂದ್ರನಾಥ್ ಮೇಟಿ ಆರೋಪಿಸಿದ್ದಾರೆ. ವೈದ್ಯರ ಹೋರಾಟಕ್ಕೆ ಸರ್ಕಾರಿ ನೌಕರರ ಸಂಘವೂ ಸಂಪೂರ್ಣ ಬೆಂಬಲ ಘೋಷಿಸಿದ್ದು, ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ.
ಸರ್ಕಾರ ಸ್ಪಂದಿಸದಿದ್ದರೆ, ಮಾರ್ಚ್ 16ರಿಂದ ಕರ್ತವ್ಯ ಬಹಿಷ್ಕಾರ ಮೂಲಕ ಮುಷ್ಕರ ತೀವ್ರಗೊಳಿಸುವ ಎಚ್ಚರಿಕೆ ನೀಡಲಾಗಿದೆ.
ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಮತ್ತು ಆರೋಗ್ಯ ಇಲಾಖೆ ನೌಕರರ ಸಂಘಗಳ ಸಂಯುಕ್ತ ನಿರ್ಧಾರದಂತೆ, ಮಾರ್ಚ್ 11 ರಿಂದ 15ರವರೆಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ, ಹೊರರೋಗಿಗಳ ಚಿಕಿತ್ಸೆ ಸಂಪೂರ್ಣ ಸ್ಥಗಿತಗೊಳಿಸಲಾಗುತ್ತದೆ. ತುರ್ತು ಸೇವೆಗಳು ಮಾತ್ರ ಲಭ್ಯವಿರಲಿವೆ. ಸರ್ಕಾರ ಸ್ಪಂದಿಸದಿದ್ದರೆ, ಮಾರ್ಚ್ 16ರಿಂದ ಕರ್ತವ್ಯ ಬಹಿಷ್ಕಾರ ಮೂಲಕ ಮುಷ್ಕರ ತೀವ್ರಗೊಳಿಸುವ ಎಚ್ಚರಿಕೆ ನೀಡಲಾಗಿದೆ.
ಸರ್ಕಾರ ವಿರುದ್ಧ ವೈದ್ಯರ ಆಕ್ರೋಶ : ಮಾ.11 ರಿಂದ ಒಪಿಡಿ ಸೇವೆ ಬಂದ್
ಬೆಂಗಳೂರು: ರಾಜ್ಯದಲ್ಲಿ ಮುಂದಿನ ತಿಂಗಳು ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗುವ ಲಕ್ಷಣಗಳು ಕಾಣಿಸಿಕೊಂಡಿದ್ದು, ಸರ್ಕಾರದ ವಿರುದ್ಧ ವೈದ್ಯರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಔಷಧ ಪೂರೈಕೆ, ವೈದ್ಯರ ನೇಮಕ, ಬಡ್ತಿ ಮತ್ತು ವರ್ಗಾವಣೆ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಮಾರ್ಚ್ 11ರಿಂದ ರಾಜ್ಯವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗಿದೆ.
2023ರಲ್ಲಿ ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಕೈವಾಡವಿದೆ ಎಂದು ಟ್ರುಡೊ ಆರೋಪಿಸಿದ್ದರು.
ಜಸ್ಟಿನ್ ಟ್ರುಡೊ ನಂತರ ಕೆನಡಾ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮಾರ್ಕ್ ಕಾರ್ನಿ ಅವರ ಮೊದಲ ಭಾರತ ಭೇಟಿ ಇದಾಗಿದೆ. ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಅವಧಿಯಲ್ಲಿ ಹದಗೆಟ್ಟಿದ್ದ ಭಾರತ-ಕೆನಡಾ ಸಂಬಂಧವನ್ನು ಮರುರೂಪಿಸುವುದು ಮಾರ್ಕ್ ಕಾರ್ನಿ ಅವರ ಪ್ರಮುಖ ಉದ್ದೇಶವಾಗಿದೆ. 2023ರಲ್ಲಿ ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಕೈವಾಡವಿದೆ ಎಂದು ಟ್ರುಡೊ ಆರೋಪಿಸಿದ್ದರು. ಆದರೆ, ಭಾರತ ಈ ಆರೋಪವನ್ನು ತೀವ್ರವಾಗಿ ತಳ್ಳಿಹಾಕಿತ್ತು, ಇದರಿಂದ ಉಭಯ ದೇಶಗಳ ಸಂಬಂಧದಲ್ಲಿ ಬಿರುಕು ಮೂಡಿತ್ತು. ಈ ಹಿನ್ನೆಲೆಯಲ್ಲಿ ಕಾರ್ನಿ ಅವರ ಭೇಟಿ ಮಹತ್ವ ಪಡೆದಿದೆ.