ಜನರ ಮೆಚ್ಚುಗೆಗಾಗಿ ಈ ಬಜೆಟ್ ಮಂಡಿಸಿದಂತಿದೆ
ನವದೆಹಲಿ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ ಕೇಂದ್ರ ಆಯವ್ಯಯದ ಬಗ್ಗೆ ನಮ್ಮ ರಾಜ್ಯವನ್ನು ಪ್ರತಿನಿಧಿಸುವ ಕಾಂಗ್ರೆಸ್ ಸಂಸದರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಬಹುತೇಕರು ಇದೊಂದು ಸಾರವಿಲ್ಲದ ಬಜೆಟ್ ಎಂದಿದ್ದಾರೆ. ಬನ್ನಿ ಅವರ ಮಾತಲ್ಲೇ ಕೇಳೋಣ.
- Read more about ಜನರ ಮೆಚ್ಚುಗೆಗಾಗಿ ಈ ಬಜೆಟ್ ಮಂಡಿಸಿದಂತಿದೆ
- Log in or register to post comments
ರಾಯ್ ಆತ್ಮಹತ್ಯೆ ಕೇಸ್ : ಸಾವಿಗೂ ಮುನ್ನ ಮನೋವೈದ್ಯರ ಕೌನ್ಸೆಲಿಂಗ್, ಹೊರಬಿದ್ದ ಸ್ಫೋಟಕ ಮಾಹಿತಿ!
ಬೆಂಗಳೂರು : ಕಾನ್‌ಫಿಡೆಂಟ್ ಗ್ರೂಪ್‌ನ ಸಂಸ್ಥಾಪಕ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ಹೊಸ ಆಯಾಮ ಪಡೆಯುತ್ತಿದೆ. ಆದಾಯ ತೆರಿಗೆ ಇಲಾಖೆಯ ತನಿಖೆ ನಡೆಯುತ್ತಿದ್ದಾಗಲೇ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ ಅವರ ಸುತ್ತ ಹಲವು ಅನುಮಾನಗಳು ಸುಳಿದಾಡುತ್ತಿವೆ. ಈ ಮಧ್ಯೆ, ರಾಯ್ ಅವರ ಸಾವಿಗೆ ಮಾನಸಿಕ ಸ್ಥಿತಿಯೇ ಕಾರಣವೇ ಎಂಬ ಪ್ರಶ್ನೆಗೆ ಪುಷ್ಠಿ ನೀಡುವ ಸ್ಫೋಟಕ ಮಾಹಿತಿ ಇದೀಗ ಬಹಿರಂಗವಾಗಿದೆ. ಅವರು ಕಳೆದ ಹಲವು ದಿನಗಳಿಂದ ಮನೋವೈದ್ಯರಿಂದ ಕೌನ್ಸೆಲಿಂಗ್ ಪಡೆಯುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.
ಆಮದು ಸುಂಕ ಇಳಿಕೆ - ಮೋದಿಯೊಂದಿಗೆ ಮಾತುಕತೆ ನಂತರ ಟ್ರಂಪ್ ಘೋಷಣೆ
ಇಂದು ಬೆಳಿಗ್ಗೆ ಭಾರತದ ಪ್ರಧಾನಿ ಮೋದಿಯವರೊಂದಿಗೆ ಮಾತನಾಡಲು ನನಗೆ ಹೆಮ್ಮೆ ಎನಿಸಿದೆ. ಅವರು ನನ್ನ ಆತ್ಮೀಯ ಸ್ನೇಹಿತರಲ್ಲಿ ಒಬ್ಬರು ಮತ್ತು ಅವರು ತಮ್ಮ ದೇಶದ ಪ್ರಭಾವಶಾಲಿ ಮತ್ತು ಗೌರವಾನ್ವಿತ ನಾಯಕ. ವ್ಯಾಪಾರ, ರಷ್ಯಾ ಮತ್ತು ಉಕ್ರೇನ್‌ನೊಂದಿಗಿನ ಯುದ್ಧವನ್ನು ಕೊನೆಗೊಳಿಸುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ನಾವು ಮಾತನಾಡಿದ್ದೇವೆ. ರಷ್ಯಾದ ತೈಲವನ್ನು ಖರೀದಿಸುವುದನ್ನು ನಿಲ್ಲಿಸಲು ಮತ್ತು ಯುನೈಟೆಡ್ ಸ್ಟೇಟ್ಸ್ ಮತ್ತು ಬಹುಶಃ ವೆನೆಜುವೆಲಾದಿಂದ ಹೆಚ್ಚಿನದನ್ನು ಖರೀದಿಸಲು ಅವರು ಒಪ್ಪಿಕೊಂಡರು. ಇದು ಉಕ್ರೇನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸಲು ಸಹಾಯ ಮಾಡುತ್ತದೆ.
ಜನತಾ ದರ್ಶನದಲ್ಲಿ ಮುಗ್ಧ ಮನವಿ : ಪುಟ್ಟ ಅನಾಬಿಗೆ ಸಿಕ್ಕಿತು ಶಾಲಾ ಪ್ರವೇಶ!
ಲಕ್ನೋ : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ 'ಜನತಾ ದರ್ಶನ' ಕಾರ್ಯಕ್ರಮದಲ್ಲಿ ಸೋಮವಾರ ಒಂದು ಅಪರೂಪದ ಮತ್ತು ಮನಮುಟ್ಟುವ ಘಟನೆ ನಡೆದಿದೆ. ನೂರಾರು ಜನರ ಸಮಸ್ಯೆಗಳ ನಡುವೆ, ಪುಟ್ಟ ಬಾಲಕಿ ಅನಾಬಿ ಅಲಿ ತನ್ನ ಶಾಲಾ ಪ್ರವೇಶದ ಕೋರಿಕೆಯೊಂದಿಗೆ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದು, "ಯೋಗಿ ಅಂಕಲ್, ಸ್ಕೂಲ್ ಅಡ್ಮಿಷನ್ ಮಾಡಿಸಿಕೊಡಿ" ಎಂದು ಮುಗ್ಧವಾಗಿ ಮನವಿ ಮಾಡಿದ್ದಳು. ಆಕೆಯ ಈ ಮನವಿಗೆ ಸಿಎಂ ಯೋಗಿ ತಕ್ಷಣ ಸ್ಪಂದಿಸಿ ಸಿಹಿ ಸುದ್ದಿ ನೀಡಿದ್ದಾರೆ.
ಸಿನಿಮಾ ಸ್ಟೈಲ್ ದರೋಡೆ: ಏಜೆಂಟ್‌ನ 31 ಲಕ್ಷಕ್ಕೂ ಅಧಿಕ ಹಣ ಲೂಟಿ
ಬೆಂಗಳೂರು : ಬೆಂಗಳೂರಿನ ಬನ್ನೇರುಘಟ್ಟ ಸಮೀಪ ಸಿನಿಮಾ ಶೈಲಿಯಲ್ಲಿ ನಡೆದ ದರೋಡೆಯಲ್ಲಿ, ಕ್ಯಾಷ್ ಕಲೆಕ್ಟಿಂಗ್ ಏಜೆಂಟ್ ಒಬ್ಬರಿಗೆ ಲಾಂಗ್ ತೋರಿಸಿ ಬೈಕ್ ಸಮೇತ ಬರೋಬ್ಬರಿ 31 ಲಕ್ಷಕ್ಕೂ ಅಧಿಕ ಹಣವನ್ನು ಲೂಟಿ ಮಾಡಲಾಗಿದೆ. ನಿನ್ನೆ (ಭಾನುವಾರ) ಸಂಜೆ ಈ ಘಟನೆ ನಡೆದಿದ್ದು, ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Read more about ಸಿನಿಮಾ ಸ್ಟೈಲ್ ದರೋಡೆ: ಏಜೆಂಟ್‌ನ 31 ಲಕ್ಷಕ್ಕೂ ಅಧಿಕ ಹಣ ಲೂಟಿ
- Log in or register to post comments
ಸ್ಟ್ರಾಂಗ್ ಕುಡಿದಿದ್ದೀಯಾ? ಅಶೋಕ್‌ಗೆ ಸಿದ್ದು ಹಾಸ್ಯ ಚಟಾಕಿ!
ಬೆಂಗಳೂರು : ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮದ್ಯದ ದರ ಏರಿಕೆ ಕುರಿತು ಚರ್ಚೆ ನಡೆಯುತ್ತಿದ್ದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಪಕ್ಷ ನಾಯಕ ಆರ್. ಅಶೋಕ್ ಅವರನ್ನು ತಮಾಷೆಯಾಗಿ ಕಾಲೆಳೆದರು.
- Read more about ಸ್ಟ್ರಾಂಗ್ ಕುಡಿದಿದ್ದೀಯಾ? ಅಶೋಕ್‌ಗೆ ಸಿದ್ದು ಹಾಸ್ಯ ಚಟಾಕಿ!
- Log in or register to post comments
ಸಂಸತ್ ಅಧಿವೇಶನದಲ್ಲಿ ಕಾಂಗ್ರೆಸ್ ಸಂಸದರು ಹೀಗೇಕೆ ಮಾಡಿದ್ರು?
ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಇಂದು ತೀವ್ರ ಹೈಡ್ರಾಮಾ ನಡೆದಿದೆ. ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಣೆ ಅವರ ಇನ್ನೂ ಬಿಡುಗಡೆಯಾಗದ ಆತ್ಮಕಥೆಯ ಸಾಲುಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಭದ್ರತೆಯ ಬಗ್ಗೆ ಮಾತನಾಡಲು ಯತ್ನಿಸಿದ ರಾಹುಲ್ ಗಾಂಧಿ, ಸದನದಲ್ಲಿ ಮುಖಭಂಗ ಅನುಭವಿಸಿದ ಪ್ರಸಂಗ ನಡೆಯಿತು.
- Read more about ಸಂಸತ್ ಅಧಿವೇಶನದಲ್ಲಿ ಕಾಂಗ್ರೆಸ್ ಸಂಸದರು ಹೀಗೇಕೆ ಮಾಡಿದ್ರು?
- Log in or register to post comments
ಜೀವಕ್ಕಿಂತ ರೀಲ್ಸ್ ದೊಡ್ಡದೇ?..ಬುದ್ಧಿ ಹೇಳಿದ ಚಾಲಕನಿಗೆ ಅಹಂಕಾರದ ಉತ್ತರ
ನವದೆಹಲಿ : ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಹುಚ್ಚು ಮಿತಿಮೀರಿದೆ. ರೀಲ್ಸ್, ಸೆಲ್ಫಿ ಮತ್ತಿತರ ವಿಡಿಯೊಗಳಿಗಾಗಿ ಕೆಲವರು ಜೀವಕ್ಕೆ ಅಪಾಯ ತರುವಂತಹ ಸಾಹಸಕ್ಕೂ ಮುಂದಾಗುತ್ತಿದ್ದಾರೆ. ಇಂತಹದ್ದೇ ಒಂದು ಘಟನೆ ದೆಹಲಿಯಲ್ಲಿ ನಡೆದಿದ್ದು, ನಡು ರಸ್ತೆಯಲ್ಲೇ ಸೆಲ್ಫಿ ಕ್ಲಿಕ್ಕಿಸಿಕೊಂಡು ರೀಲ್ಸ್ ಮಾಡಲು ಮುಂದಾದ ದಂಪತಿ ನಡು ರಸ್ತೆಯಲ್ಲಿ ಹುಚ್ಚಾಟ ಮೆರೆದಿದ್ದಾರೆ. ಈ ವಿಚಾರಕ್ಕೆ ಬುದ್ಧಿ ಹೇಳಿದ ಕಾರು ಚಾಲಕನ ಜತೆ ವಾಗ್ವಾದ ನಡೆಸಿದ ವಿಡಿಯೊವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಡಾ. ಸಿ.ಜೆ. ಐಷರಾಮಿ ಕಾರ್ ಕಲೆಕ್ಷನ್ ನೋಡಿ!
ಬೆಂಗಳೂರು: ಸಾವಿರಾರು ಕೋಟಿ ಒಡೆಯ, ಐಷಾರಾಮಿ ಬದುಕಿಗೆ ಹೆಸರಾಗಿದ್ದ ಕಾನ್ಫಿಡೆಂಟ್ ಗ್ರೂಪ್‌ನ ಮಾಲೀಕ ಡಾ. ಸಿ.ಜೆ. ರಾಯ್ ತಮ್ಮ ಜೀವನದ ಪಯಣವನ್ನು ತಾವೇ ಅಂತ್ಯಗೊಳಿಸಿದ್ದಾರೆ. ಲಭ್ಯ ಮಾಹಿತಿಯ ಪ್ರಕಾರ, ಆದಾಯ ತೆರಿಗೆ (IT) ಅಧಿಕಾರಿಗಳು ಕಾನ್ಫಿಡೆಂಟ್ ಗ್ರೂಪ್ ಕಚೇರಿಯ ಮೇಲೆ ದಾಳಿ ನಡೆಸಿದ್ದರು. ವಿಚಾರಣೆ ವೇಳೆ, “ದಾಖಲೆಗಳನ್ನು ತರುತ್ತೇನೆ” ಎಂದು ಒಳ ಹೋದ ಸಿ.ಜೆ. ರಾಯ್, ತಮ್ಮಲ್ಲಿದ್ದ ಬಂದೂಕಿನಿಂದ ಎದೆಗೆ ಗುಂಡು ಹಾರಿಸಿಕೊಂಡಿದ್ದಾರೆ.
- Read more about ಡಾ. ಸಿ.ಜೆ. ಐಷರಾಮಿ ಕಾರ್ ಕಲೆಕ್ಷನ್ ನೋಡಿ!
- Log in or register to post comments
ನವದೆಹಲಿ : ಜನರ ಮೆಚ್ಚುಗೆಗಾಗಿ ಈ ಬಜೆಟ್ ಮಂಡಿಸಿದಂತಿದೆ
ನವದೆಹಲಿ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ ಕೇಂದ್ರ ಆಯವ್ಯಯದ ಬಗ್ಗೆ ನಮ್ಮ ರಾಜ್ಯವನ್ನು ಪ್ರತಿನಿಧಿಸುವ ಕಾಂಗ್ರೆಸ್ ಸಂಸದರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಬಹುತೇಕರು ಇದೊಂದು ಸಾರವಿಲ್ಲದ ಬಜೆಟ್ ಎಂದಿದ್ದಾರೆ. ಬನ್ನಿ ಅವರ ಮಾತಲ್ಲೇ ಕೇಳೋಣ.
- Read more about ನವದೆಹಲಿ : ಜನರ ಮೆಚ್ಚುಗೆಗಾಗಿ ಈ ಬಜೆಟ್ ಮಂಡಿಸಿದಂತಿದೆ
- Log in or register to post comments