ನೀವೂ ಅವಲಕ್ಕಿ ಪ್ರಿಯರಾ? ಹಾಗಿದ್ರೆ ಇಲ್ಲೊಮ್ಮೆ ನೋಡಿ. ಅವಲಕ್ಕಿ ಪ್ಯಾಕಿಂಗ್ ಹೇಗ್ ನಡೆಯುತ್ತೆ ಅಂತ. ನಿಜ ಹೇಳ್ಬೇಕಂದ್ರೆ ಅವಲಕ್ಕಿ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಆದ್ರೆ ಈ ರೀತಿ ತಿನ್ನುವ ಅವಲಕ್ಕಿ ಮೇಲೆ ಕುತ್ಕೊಂಡು ಅದನ್ನ ಪ್ಯಾಕ್ ಮಾಡಿ ಗ್ರಾಹಕರಿಗೆ ಸಪ್ಲೈ ಮಾಡ್ತಾರೆ ಅಂತ ಗೊತ್ತಾದ್ಮೇಲೆ ಇದನ್ನ ನಿಜಕ್ಕೂ ತಿನ್ನೋಕೆ ಮನಸ್ಸೇ ಆಗಲ್ಲ.
ನಾವ್ ಯಾವಾಗ್ಲೂ ಹೈಜಿನ್ ಫುಡ್ ತಗೊಳ್ಬೇಕು, ಆರೋಗ್ಯ ಚೆನ್ನಾಗಿ ಇಟ್ಕೊಳ್ಬೇಕು ಅಂತ ಒಳ್ಳೆಯದನ್ನೇ ಆರಿಸಿ ತರ್ತೀವಿ. ಆದ್ರೆ ಅದೇ ಒಳ್ಳೆಯ ಫುಡ್ ಹೀಗೆ ತಯಾರಾಗುತ್ತೆ ಅಂದ್ರೆ ಏನ್ ಹೇಳೋದಲ್ವಾ? ಗ್ರಾಹಕರೇ ದೇವರು ಅಂತ ಹೇಳ್ತಾರೆ. ಆದ್ರೆ ಆ ಗ್ರಾಹಕರಿಗೆ ಹೇಗೆಲ್ಲಾ ಮೋಸ ಮಾಡ್ತಾರೆ ಅನ್ನೋದಕ್ಕೆ ಇದೂ ಕೂಡಾ ಒಂದು ಉದಾಹರಣೆಯಷ್ಟೇ…ಇವತ್ತು ಲಾಭದ ಆಸೆಗೆ ಹೈಜಿನ್ ಅನ್ನೋ ಪದವನ್ನೇ ಮರೆತಿರ್ತಾರೆ. ಇವ್ರಿಗೆಲ್ಲ ಜನರ ಆರೋಗ್ಯ ಚೆನ್ನಾಗಿದ್ರೆಷ್ಟು ಬಿಟ್ಟರೆಷ್ಟು… ಒಳ್ಳೆ ವ್ಯಾಪಾರ ಆಗ್ಬೇಕು ಲಾಭ ಆಗ್ಬೇಕು ಅಷ್ಟೇ… ಹಾಗಾಗಿ ಇವತ್ತು ನಾವು ತಿನ್ನುವ ಆಹಾರದಲ್ಲಿ ಬರೀ ಕೆಮಿಕಲ್ ತುಂಬಿದ್ದು, ನೈಸರ್ಗಿಕ ಆಹಾರವೇ ಸಿಗದಂತಾಗಿದೆ. ನೂರಾರು ಕಾಯಿಲೆಗಳಿಗೆ ಜನ ತುತ್ತಾಗ್ತಿದ್ದಾರೆ. ಇದನ್ನೆಲ್ಲಾ ನಿಯಂತ್ರಣ ಮಾಡ್ಬೇಕಾದ ಆಹಾರ ಸುರಕ್ಷತಾ ಪ್ರಾಧಿಕಾರ ಎಲ್ಲಿದೆ.